ಶನಿವಾರ, ಜೂನ್ 5, 2010

ಮಕ್ಕಳ ಹಾಡುಗಳು

ಚಪಾತಿ ಚಪ್ ಚಪ್
ಜಲೇಬಿ ಜುಮ್ ಜುಮ್
ಕಡ್ಲೇಕಾಯಿ ಗರಮ್ ಗರಮ್
ಉಪ್ಪಿನಕಾಯಿ ಟ್.. ಟ್...

:prayer: :prayer: :prayer: :prayer: :prayer: :prayer: :prayer: :prayer: :prayer: :prayer:

ಎಳೆಯುತ ಗಾಡೀ ! ಎತ್ತಿನ ಜೋಡಿ
ದಡ ಬಡ ಸದ್ದಿನ ನಮ್ಗಾಡಿ

ಕೊರಳಿಗೆ ಗ೦ಟೆ ! ಕ೦ಚಿನ ಗ೦ಟೆ
ಘಣ ! ಘಣ ! ಗ೦ಟೆ

ಝಣ ! ಝಣ ! ಝಣ ! ಗ೦ಟೆ

ಕೊ೦ಬಿನ ಕಳಸಕೆ ಕಟ್ಟಿದ ಗೆಜ್ಜೆ
ಕಡಾಣಿ ಕ೦ಬಿಗೆ ಹಾಕಿದ ಗೆಜ್ಜೆ

ಝಣ ! ಝಣ ! ಝಣ ! ಗೆಜ್ಜೆ

ತಾಳಕೆ ಇಡುತಿಹ ಎತ್ತಿನ ಹೆಜ್ಜೆ
ಘಲು ! ಘಲು ! ಘಲು ! ಗೆಜ್ಜೆ

ಘಲು ! ಘಲು ! ಘಲು ! ಗೆಜ್ಜೆ

ಗಾಲಿಯು ಉರುಳುವ ಕಟಕಟ ಸದ್ದು
ಗಾಡಿಯು ಓಡುವ ದಡ ಬಡ ಸದ್ದು

ದಡ ! ಬಡ ! ದಡ ! ಸದ್ದು

ಬಹಳ ಒಳ್ಳೆ ನಮ್ಮಿಸ್ಸು
ಏನ್ ಹೇಳಿದ್ರು ಎಸ್ಸೆಸ್ಸು
ನಗ್ತಾ ನಗ್ತಾ ಮಾತಾಡ್ತಾರೆ
ಸ್ಕೂಲಿಗೆಲ್ಲ ಫೇಮಸ್ಸು

ಒಂದು ಕಾಡಿನ ಮಧ್ಯದೊಳಗೆ
ಎರಡು ಮರಗಳ ನಡುವೆ ಕೂತು
ಮೂರು ಕರಡಿಗಳಾದುತಿದವು
ನಾಲ್ಕು ಮರಿಗಳ ಸೇರಿಸಿ
ಐದು ಜನರಾ ಬೇಟೆಗಾರರು
ಆರು ಬಲೆಗಳ ಹೊತ್ತು ತಂದು
ಏಳು ಕರಡಿಗಳಿಡಿದರು
ಎಂಟು ಅಂದನು ಅದರಲೊಬ್ಬ
ಒಂಭತ್ತು ಎಂದನು ಬೇರೆಯವನು
ಹತ್ತು **********
ಇಲ್ಲಿಗೆ ಕಥೆ ಮುಗಿಯಿತು

Dose dose thinalu aase
Muru kaasina kaali dose
aaru kaasina masala ದೋಸೆ

Haaligondu kaasu
Mosarigondu Kaasu
Appa kotta kaasu
Aakashake hoyitu
Chikkappa kotta kaasu
chikadaagi hoyitu
Maama kotta kaasu
Maayavagi hoyitu
Amma kotta kaasu
Haalu-mosarige ಆಯಿತು


ಅಣ್ಣನು ಮಾಡಿದ ಗಾಳಿಪಟ
ಬಣ್ಣದ ಹಾಳೆಯ ಗಾಳಿಪಟ

ನೀಲಿಯ ಬಾನಲಿ ತೇಲುವ ಸುಂದರ
ಬಾಲಂಗೊಸಿಯ ನನ್ನ ಪಟ

ಬಿದಿರಿನ ಕಡ್ಡಿಯ ಗಾಳಿಪಟ
ಬೆದರದ ಬೆಚ್ಚದ ಗಾಳಿಪಟ

ದಾರವ ಜಗ್ಗಿ
ದೂರದ ನಗಿಸುವ ನನ್ನ ಪಟ


ನಮ್ಮ ಪುಟ್ಟ
ಬಹಳ ದಿಟ್ಟ
ನಾಯಿ ಬಾಲ ಜಗ್ಗಿದ
ಬೌ ಬೌ ಬೊಗಳಿದಷ್ಟು
ಅವನು ತುಂಬ ಹಿಗ್ಗಿದ


ಪುಟ್ಟ ಮರಿ ಜಾಣ ಮರಿ
ಎಲ್ಲಿ ಓಡುವೆ?

ಪುಟ್ಟ ಕಣ್ಣು ಅರಳಿಸಿ
ನೀನೇನು ನೋಡುವೆ
ಮುದ್ದು ಕಿವಿ ನಿಮಿರಿಸಿ
ನೀನೇನು ಕೇಳುವೆ

ಅಲ್ಲಿ ಇಲ್ಲಿ ನೋಡಿ
ಚಂಗನೆದ್ದು ಜಿಗಿಯುವೆ
ನನ್ನ ಕೈಗೆ ಸಿಗದೆ
ಏಕೆ ಹೀಗೆ ಕಾಡುವೆ

ಮುದ್ದು ಮರಿ ಮೇಕೆ ಮರಿ
ಎಲ್ಲಿ ನೀನು ಓಡುವೆ
ನನ್ನ ಜೊತೆಗೆ ಆಡು ನೀನು
ನಿನ್ನ ಮುದ್ದು ಮಾಡುವೆ


ಹತ್ತು ಹಸಿರು ಶೀಷೆಗಳು ಅಟ್ಟದ ಮೇಲಿತ್ತು
ಅದರಲ್ಲಿ ಒಂದು ಬಿದ್ದು ಒಂಭತ್ತು ಆಯಿತು

ಒಂಭತ್ತು ಹಸಿರು ಶೀಷೆಗಳು ಅಟ್ಟದ ಮೇಲಿತ್ತು
ಅದರಲ್ಲಿ ಒಂದು ಬಿದ್ದು ಎಂಟು ಆಯಿತು

ಎಂಟು ಹಸಿರು ಶೀಷೆಗಳು ಅಟ್ಟದ ಮೇಲಿತ್ತು
ಅದರಲ್ಲಿ ಒಂದು ಬಿದ್ದು ಏಳು ಆಯಿತು

ಏಳು ಹಸಿರು ಶೀಷೆಗಳು ಅಟ್ಟದ ಮೇಲಿತ್ತು
ಅದರಲ್ಲಿ ಒಂದು ಬಿದ್ದು ಆರು ಆಯಿತು

ಆರು ಹಸಿರು ಶೀಷೆಗಳು ಅಟ್ಟದ ಮೇಲಿತ್ತು
ಅದರಲ್ಲಿ ಒಂದು ಬಿದ್ದು ಐದು ಆಯಿತು

ಐದು ಹಸಿರು ಶೀಷೆಗಳು ಅಟ್ಟದ ಮೇಲಿತ್ತು
ಅದರಲ್ಲಿ ಒಂದು ಬಿದ್ದು ನಾಲ್ಕು ಆಯಿತು

ನಾಲ್ಕು ಹಸಿರು ಶೀಷೆಗಳು ಅಟ್ಟದ ಮೇಲಿತ್ತು
ಅದರಲ್ಲಿ ಒಂದು ಬಿದ್ದು ಮೂರು ಆಯಿತು

ಮೂರು ಹಸಿರು ಶೀಷೆಗಳು ಅಟ್ಟದ ಮೇಲಿತ್ತು
ಅದರಲ್ಲಿ ಒಂದು ಬಿದ್ದು ಎರಡು ಆಯಿತು

ಎರಡು ಹಸಿರು ಶೀಷೆಗಳು ಅಟ್ಟದ ಮೇಲಿತ್ತು
ಅದರಲ್ಲಿ ಒಂದು ಬಿದ್ದು ಒಂದು ಆಯಿತು

ಒಂದು ಹಸಿರು ಶೀಷೆ ಅಟ್ಟದ ಮೇಲಿತ್ತು
ಮೇಲಿಂದ ಕೆಳಗೆ ಬಿದ್ದು ಅದು ಒಡೆದು ಹೋಯಿತು


ಹಳ್ಳಿ ಹುಡ್ಗಿನ್ ಕಟ್ಕೊಂಡು ನಾನೇನ್ ಮಾಡ್ಲಿ
ಕುಂಕುಮ ತಂದು ಕೊಟ್ರೆ ರಕ್ತ ಅಂತಳಲ್ಲಾ
ಚೆಲ್ಲಿ ಬಿಡ್ತಾಳಲ್ಲಾ

ಹಳ್ಳಿ ಹುಡ್ಗಿನ್ ಕಟ್ಕೊಂಡು ನಾನೇನ್ ಮಾಡ್ಲಿ
ಪೌಡರು ತಂದು ಕೊಟ್ರೆ ಹಿಟ್ಟು ಅಂತಾಳಲ್ಲಾ
ರೊಟ್ಟಿ ತಟ್ತಳಲ್ಲ

ಹಳ್ಳಿ ಹುಡ್ಗಿನ್ ಕಟ್ಕೊಂಡು ನಾನೇನ್ ಮಾಡ್ಲಿ
ಸ್ನೋ ತಂದು ಕೊಟ್ರೆ ಬೆಣ್ಣೆ ಅಂತಾಳಲ್ಲಾ
ತಿಂದೆ ಬಿಡ್ತಾಳಲ್ಲ

ಹಳ್ಳಿ ಹುಡ್ಗಿನ್ ಕಟ್ಕೊಂಡು ನಾನೇನ್ ಮಾಡ್ಲಿ


ನನ್ನಯ ಬುಗುರಿ ಬಣ್ಣದ ಬುಗುರಿ
'ಗುರು ಗುರು' ಸದ್ದನು ಮಾಡುವ ಬುಗುರಿ

ಜಾಳಿಗೆ ಸುತ್ತಿ ಕೈಯನು ಎತ್ತಿ
ಬೀಸಲು ಭರದಿ ಸುತ್ತುವ ಬುಗುರಿ

ಹೊಡೆತಕೆ ಅಂಜದೆ ಕೆಚ್ಚೆದೆಯಿಂದಲಿ
'ಗಿರಿ ಗಿರಿ' ತಿರುಗುವ ಮೆಚ್ಚಿನ ಬುಗುರಿ

ಅಂಗೈ ಮೇಲೆ ಆಡುವ ಬುಗುರಿ
ಕಚಗುಳಿಯಿಕ್ಕುವ ಮೋಜಿನ ಬುಗುರಿ

ಕಾಮನ ಬಿಲ್ಲನು ಭೂಮಿಗೆ ಇಳಿಸಿ
'ಗರ ಗರ' ಸುತ್ತುವ ಬಣ್ಣದ ಬುಗುರಿ



{ ಹಾವು ಅಂದ್ರೆ ಮರಿ ಗುಬ್ಬಿಗೆ ಬಾರಿ ದಿಗಿಲೇನೆ
ನೆನಿಸಿಕೊಂದ್ರೆ ಮೈ ನಡುಗುತ್ತೆ ಹಾಡೇ ಹಗಲೇನೆ } - ೨
ಒಂದು ಸಾರಿ ಪುಟಾಣಿ ಗುಬ್ಬಿ ಅಮ್ಮನ ಕೇಳುತ್ತೆ - ೨
ಅಮ್ಮ ಅಮ್ಮ ಬೂಸ್ಸ್ ಬೂಸ್ಸ್ ಹಾವು ಯಾಗಿರತ್ತೆ ?


ಹಾವು ಅಂದ್ರೆ ಮರಿ ಗುಬ್ಬಿಗೆ ಬಾರಿ ದಿಗಿಲೇನೆ
ನೆನಿಸಿಕೊಂದ್ರೆ ಮೈ ನಡುಗುತ್ತೆ ಹಾಡೇ ಹಗಲೇನೆ


ಒಕ್ಕಲಿ ಬೆನ್ನು ತಿಕ್ಕಿ ಕೊಳ್ತಾ ಅಮ್ಮ ಅನ್ನುತ್ತೆ
ಒಳ್ಳೆ ಪ್ರಶ್ನೆ ಹಾವು ಯಾಗಿರತ್ತೆ ? ? ಹಾವು ಯಾಗಿರತ್ತೆ ?
ಹಾವ ಇರುತ್ತೆ ಹಾವಿನ ಹಾಗೆ ಕಾಗೆ ಕಪ್ಪಗೆ
ಸಪೂರ ತಳ ತಳ ಕೆಂಡದ ಕಣ್ಣು ಕಟ್ಟೆ ದಪ್ಪಗೆ



ಹಾವು ಅಂದ್ರೆ ಮರಿ ಗುಬ್ಬಿಗೆ ಬಾರಿ ದಿಗಿಲೇನೆ
ನೆನಿಸಿಕೊಂದ್ರೆ ಮೈ ನಡುಗುತ್ತೆ ಹಾಡೇ ಹಗಲೇನೆ



ಒಂದು ಸಾರಿ ಪುಟಾಣಿ ಗುಬ್ಬಿ ಅಮ್ಮನ ಕೇಳುತ್ತೆ
ಅಮ್ಮ ಅಮ್ಮ ಬೂಸ್ಸ್ ಬೂಸ್ಸ್ ಹಾವು ಯಾಗಿರತ್ತೆ ?


ಸೂರಿಗೆ ಸುತ್ತಿ ಜೋತಡುತ್ತೆ ಗೋದಿ ಬೆನ್ನು
ದೀಪದ ಹಾಗೆ ಹುರಿತಿರುತ್ತೆ ಹಾವಿನ ಕಣ್ಣು
ಬೂಸ್ ಎನ್ನುತ್ತೆ ದರಿದ್ರ ಹಾವಿಗೆ ತುಂಬದ ಹೊಟ್ಟೆ
ಹಿಡಿ ಹಿಡಿಯಾಗಿ ನುಗ್ ಬಿಡುತ್ತೆ ಹಕ್ಕಿ ಮೊಟ್ಟೆ



ಹಾವು ಅಂದ್ರೆ ಮರಿ ಗುಬ್ಬಿಗೆ ಬಾರಿ ದಿಗಿಲೇನೆ
ನೆನಿಸಿಕೊಂದ್ರೆ ಮೈ ನಡುಗುತ್ತೆ ಹಾಡೇ ಹಗಲೇನೆ



ಹಕ್ಕಿಯ ಮೊಟ್ಟೆ ನುಗಿದ ಮೇಲೆ ಹಿಡಿ ಹಿಡಿಲಿ
ಹಕ್ಕಿ ಮರಿ ಬೆಳ್ಕೊಳುತ್ತೆ ಹಾವಿನ ಹೊಟ್ಟೆಲಿ
ಹಕ್ಕಿ ಮರಿ ಹುಟ್ಟ ಕೊಳುತ್ತೆ ಹಾವಿನ ಹೊಟ್ಟೆಲಿ
ಅಂತ ಪುಟಾಣಿ ಕುಣಿದಾಡ್ತಿತ್ತು ಅಮ್ಮ ನ ತೋಳಲ್ಲಿ - ೨



ನಿಟ್ಟುಸೀರ್ ಇಡ್ತತು ಇಲ್ಲ ಬಂಗಾರ
ಇನ್ನು ನಿನಗೆ ತಿಳಿಯದಮ್ಮ ಹಾವಿನ ಹುನ್ನಾರ
ಹಾವಿನ ಹೊಟ್ಟೆ ಸೇರಿದ ಮೇಲೆ ಹೇಳೋದ್ ಇನ್ನೇನು - ೨
ಹಾವಿನ ಮೊಟ್ಟೆ ಹಾಗ್ ಬಿಡುತ್ತೆ ಹಕ್ಕಿ ಮೊಟ್ಟೇನು
__________________

ಆನೆ ಬಂತೊಂದಾನೆ ಯಾವೂರಾನೆ?
ಚನ್ನಪಟ್ಣದಾನೆ ಇಲ್ಲಿಗ್ಯಾಕೆ ಬಂತು?
ಮಕ್ಳನ್ನೋಡಕ್ ಬಂತು ಏನೇನ್ ತಂತು?
ಕೊಬ್ರಿ ಬೆಲ್ಲ ತಂತು ಮಕ್ಕಳ್ಗೆಲ್ಲ
ಹಂಚಿ ಓಡಿಹೋಯ್ತು ಆನೆ










ಅಮ್ಮ ಅಮ್ಮ ಅಮ್ಮ ನಮ್ಮ ತೋಳಿಗೆ ರೆಕ್ಕೆ ಹಚ್ಚು
ಸೊಂಟಕೆ ಬೆಳ್ಳಿ ಪಟ್ಟಿ ಕಟ್ಟಿ ಹಕ್ಕಿ ಪುಚ್ಚಾ ಚುಚ್ಚು ಹಕ್ಕಿ ಪುಚ್ಚಾ ಚುಚ್ಚು ||ಪ ||


ಹಾರುತ್ತಿನಿ ರೆಕ್ಕೆ ಬಿಚ್ಚಿ ತೆಂಗಿನ ಮರಕ್ಕೂ ಮೇಲೆ - 2
ಜಗಲಿ ಮೇಲೆ ನಿಂತೇ ನಮಗೆ ಅಮ್ಮ ಟಾಟಾ ಹೇಳೇ ಅಮ್ಮ ಟಾಟಾ ಹೇಳೇ



ಅಮ್ಮ ಅಮ್ಮ ಅಮ್ಮ ನಮ್ಮ ತೋಳಿಗೆ ರೆಕ್ಕೆ ಹಚ್ಚು
ಸೊಂಟಕೆ ಬೆಳ್ಳಿ ಪಟ್ಟಿ ಕಟ್ಟಿ ಹಕ್ಕಿ ಪುಚ್ಚಾ ಚುಚ್ಚು ಹಕ್ಕಿ ಪುಚ್ಚಾ ಚುಚ್ಚು


ಹಾಗೆ ಹಾಗೆ ಮೇಲೆ ಹೋಗಿ ಮುಟ್ಟುತೀವಿ ಬಾನ - ೨
ಹೇಳುತ್ತಿವಿ ಯಾರು ಕೇಳದ ಚುಕ್ಕಿ ಹಾಡೋ ಹಾಡ ಚುಕ್ಕಿ ಹಾಡೋ ಹಾಡ


ಅಮ್ಮ ಅಮ್ಮ ಅಮ್ಮ ನಮ್ಮ ತೋಳಿಗೆ ರೆಕ್ಕೆ ಹಚ್ಚು
ಸೊಂಟಕೆ ಬೆಳ್ಳಿ ಪಟ್ಟಿ ಕಟ್ಟಿ ಹಕ್ಕಿ ಪುಚ್ಚಾ ಚುಚ್ಚು ಹಕ್ಕಿ ಪುಚ್ಚಾ ಚುಚ್ಚು


ತಿನ್ಗಾಳೂರಿನ ಅಂಗಳ ಸೇರಿ ಬೆಳ್ಳಿ ಮೊಲವನು ನೋಡಿ -೨
ಹಿಡಿಯುತ್ತಿವಿ ಆರು ಬಣ್ಣದ ಜಿಂಕೆಯಾ ಹೇಗೋ ಮಾಡಿ ಜಿಂಕೆಯಾ ಹೇಗೋ ಮಾಡಿ


ಅಮ್ಮ ಅಮ್ಮ ಅಮ್ಮ ನಮ್ಮ ತೋಳಿಗೆ ರೆಕ್ಕೆ ಹಚ್ಚು
ಸೊಂಟಕೆ ಬೆಳ್ಳಿ ಪಟ್ಟಿ ಕಟ್ಟಿ ಹಕ್ಕಿ ಪುಚ್ಚಾ ಚುಚ್ಚು ಹಕ್ಕಿ ಪುಚ್ಚಾ ಚುಚ್ಚು


ಕೊಟ್ಟೆ ಕೊಡುವನು ಚಂದ ಮಾಮ ಕೆನ್ನೆ ತುಂಬ ಮುತ್ತು - ೨
ಮುದ್ದಿಸಿ ಬಿಟ್ಟನು ತುದಿಗೆ ಇಳಿಸುವನು ಯಾರು ಇಲ್ಲದ ಹೊತ್ತು ಯಾರು ಇಲ್ಲದ ಹೊತ್ತು


ಅಮ್ಮ ಅಮ್ಮ ಅಮ್ಮ ನಮ್ಮ ತೋಳಿಗೆ ರೆಕ್ಕೆ ಹಚ್ಚು
ಸೊಂಟಕೆ ಬೆಳ್ಳಿ ಪಟ್ಟಿ ಕಟ್ಟಿ ಹಕ್ಕಿ ಪುಚ್ಚಾ ಚುಚ್ಚು ಹಕ್ಕಿ ಪುಚ್ಚಾ ಚುಚ್ಚು ಹಕ್ಕಿ ಪುಚ್ಚಾ ಚುಚ್ಚು ಹಕ್ಕಿ ಪುಚ್ಚಾ ಚುಚ್ಚು



ಟೀಚರ್: ಮುದ್ದ್ ಮರಿ ಒಂದು ವರ್ಷಕ್ಕೆ ಎಷ್ಟು ಮಾಸಗಳು ಗೊತ್ತ?
ಮುದ್ದು: ಗೊತ್ತು ಮಿಸ್
ಟೀಚರ್: ಅವಗಳ ಹೆಸರು ಗೊತ್ತ ?
ಮುದ್ದು: ಓಓ ಓಒ
ಟೀಚರ್: ಅಗದ್ರೆ ಎಲ್ಲಿ ಹೇಳು ನೋಡೋಣ!
ಮುದ್ದು: ಮಿಸ್ ಮಿಸ್ ನೀವೇ ಮೊದ್ಲು ಹೇಳ್ ಬಿಡಿ ಮಿಸ್
ಟೀಚರ್: .. ನಾನೇ ಮೊದ್ಲು ಹೇಳಬೇಕಾ? ಎಂತ ಜಾಣಮರಿ ನೀನು !! :)


ಟೀಚರ್: ಹನ್ನೆರಡು ತಿಂಗಳು ಒಂದು ವರ್ಷಕ್ಕೆ - 2
ಬಲು ಚೆಂದ ಅವುಗಳ ಹೆಸರು ಹೇಳೋಕೆ - 2
ಹನ್ನೆರಡು ತಿಂಗಳು ಒಂದು ವರ್ಷಕ್ಕೆ


ಜನೆವರಿ ಫೆಬ್ರುವರಿ ಮಾರ್ಚಿ ಏಪ್ರಿಲ್
ಜನೆವರಿ ಫೆಬ್ರುವರಿ ಮಾರ್ಚಿ ಏಪ್ರಿಲ್
- slow aagi pause in b/n every word
ಮೇ ಮತ್ತು ಜೂನ್ ಮತ್ತು ಜುಲೈ ಆಗಸ್ಟ್
ಮೇ ಮತ್ತು ಜೂನ್ ಮತ್ತು ಜುಲೈ ಆಗಸ್ಟ್
- slow aagi pause in b/n every word
ಸೆಪ್ಟೆಂಬರ್ ಅಕ್ಟೋಬರ್ ನವೆಂಬರ್ ಡಿಸೆಂಬರ್
ಮೇ ಮತ್ತು ಜೂನ್ ಮತ್ತು ಜುಲೈ ಆಗಸ್ಟ್
- slow aagi pause in b/n every word

ಸರಿಯಾಗಿ ಹೇಳಿದರೆ ನೂರು ನಂಬರ್

ಮುದ್ದು repeats the same....and laughs at the end



ಹುಲಿಯಣ್ಣ ಹುಲ್ಲಿಯಣ್ಣ


ಹುಲಿಯಣ್ಣ ಹುಲ್ಲಿಯಣ್ಣ ಕಾಡಿಗೆ ಹಿರಿಯಣ್ಣ
ಅದರೂ ನೀನು ಕಾಡಲ್ಲೇ ಇರು ಊರಿನೊಳಗೆ ಬರ ಬೇಡಣ್ಣ


ಹುಲಿಯಣ್ಣ ಹುಲ್ಲಿಯಣ್ಣ ಎಂತ ಮೀಸೆ ನಿನಗಣ್ಣ
ಎಂತ ಬಾಯಿ, ಎಂತ ಹಲ್ಲು, ಎಂತ ಗರ್ಜನೆ ನಿನದಣ್ಣ


ಹುಲಿಯಣ್ಣ ಹುಲ್ಲಿಯಣ್ಣ ಪಳ ಪಳ ಗಾಜಿನ ಕಣ್ಣಣ್ಣ
ಚೂರಿಗಿಂತ ಚೂಪು ಹುಗುರು ಬಣ್ಣದ ಗೆರೆಯ ಮೈಯಣ್ಣ


ಹುಲಿಯಣ್ಣ ಹುಲ್ಲಿಯಣ್ಣ ಹತ್ತಿರ ನೀ ಬರ ಬೇಡಣ್ಣ
ಹತ್ತಿರ ಬಂದರೆ ನಾಲಿಗೆ ಒಣಗಿ ಚಡ್ಡಿ ವದ್ದೆ ತಿಳಿಯಣ್ಣ


ಚೈತ್ರ ವೈಶಕ - ವಸಂತ ಋತು
ಜ್ಯೇಷ್ಠ ಆಷಾಡ - ಗ್ರೀಷ್ಮ ಋತು
ಶ್ರವಣ ಭ್ರಾದ್ರಪದ - ವರ್ಷದ ಋತು
ಅಷ್ವಿಜ ಕಾರ್ತಿಕ - ಶರದ್ ಋತು
ಮಾರ್ಗಶಿರ ಪುಷ್ಯ - ಹೇಮಂತ ಋತು
ಮಾಗ ಪಾಲ್ಗುಣ - ಶಿಶಿರ ಋತು


ರತ್ತೋ ರತ್ತೋ ರಾಯನ ಮಗಳೇ
ಬಿತ್ತೋ ಬಿತ್ತೋ ಭೀಮನ ಮಗಳೇ

ಆದಿನಾರೆಮ್ಮೆ ಕಾಸಲಾರೆ
ಬೈಟು ಗುಬ್ಬಿ ಬಾಲೆ ಕಂಬ
ಕುಕ್ಕರ ಬಸವಿ ಕೂರೆ ಬಸವಿ
|| 2 ||


ಅಣ್ಣನು ಮಾಡಿದ ಗಾಳಿಪಟ
ಬಣ್ಣದ ಹಾಳೆಯ ಗಾಳಿಪಟ

ನೀಲಿಯ ಬಾನಲಿ
ತೇಲುವ ಸು೦ದರ
ಬಾಲ೦ಗೋಸಿಯ ನನ್ನ ಪಟ

ಬಿದಿರಿನ ಕಡ್ಡಿಯ ಗಾಳಿಪಟ
ಬೆದರದ ಬೆಚ್ಚದ ಗಾಳಿಪಟ
ದಾರವ ಜಗ್ಗಿ
ದೂರದ ನಗಿಸುವ ನನ್ನ ಪಟ


ಅಚ್ಚಚ್ಚು ಬೆಲ್ಲದಚ್ಚು
ಅಲ್ಲಿ ನೋಡು ಇಲ್ಲಿ ನೋಡು
ಸಂಪಿಗೆ ಮರದಲಿ ಗುಂಪು ನೋಡು

ಯಾವ ಗುಂಪು?
ಕಾಗೆ ಗುಂಪು
ಯಾವ ಕಾಗೆ?
ಕಪ್ಪು ಕಾಗೆ
ಯಾವ ಕಪ್ಪು?
ಇಜ್ಜಿಲ್ ಕಪ್ಪು
ಯಾವ ಇಜ್ಜಿಲು ?
ಸೌದೆ ಇಜ್ಜಿಲು
ಯಾವ ಸೌದೆ ?
ಒಲೆ ಸೌದೆ
ಯಾವ ಒಲೆ ?
ರೊಟ್ಟಿ ಒಲೆ
ಯಾವ ರೊಟ್ಟಿ?
ತಿನ್ನೋ ರೊಟ್ಟಿ
ಯಾವ ತಿನ್ನೋ?
ಹೇಟು ತಿನ್ನೋ
ಯಾವ ಹೇಟು ?
ದೊಣ್ಣೆ ಹೇಟು
ಯಾವ ದೊಣ್ಣೆ ?
ದಪ್ಪ ದೊಣ್ಣೆ
ಯಾವ ದಪ್ಪ ?
ನಿನ್ನ ಹೊಟ್ಟೆ ದಪ್ಪ
Big Laugh



ಮಳೆ ಬಂತು ಮಳೆ
ಕೊಡೆ ಹಿಡಿದು ನಡೆ
ದಾರಿಯಲ್ಲಿ ಜಾರಿಬಿದ್ದು
ಬಟ್ಟೆಯಲ್ಲ ಕೊಳೆ
ಬಿಸಿಲು ಬಂತು ಬಿಸಿಲು
ಕೋಟು ಟೋಪಿ ತೆಗೆ
ಬಾವಿಯಲ್ಲಿ ನೀರು ಸೇದಿ
ಸೋಪು ಹಾಕಿ ಒಗೆ




ಲಿಂಕ್ ನಲ್ಲಿ ಮಕ್ಕಳ ಆಡಿಯೋ ಗೀತಗಳನ್ನು kelabahudu








2 ಕಾಮೆಂಟ್‌ಗಳು: