ಭಾನುವಾರ, ಜನವರಿ 9, 2011

ಸಿಲ್ಲಿ ಪೊಯೆoಟ

ಬರೀ ತರ್ಲೆ ಅಲ್ಲ, ಸಿಕ್ಕಾಪಟ್ಟೆ ತರ್ಲೆ ಜೋಕ್ಸ್!

ಟೀಚರ್ (ಸಿಟ್ಟಿನಿಂದ) : ಲೇ ಗುಂಡ, ನೀನು ಮುಂದಿನ ಜನ್ಮದಲ್ಲಿ ನಾಯಿಯಾಗಿ ಹುಟ್ಟು.
ಗುಂಡ (ಮನಸ್ಸಿನಲ್ಲೇ) : ನೀವು ಮುಂದಿನ ಜನ್ಮದಲ್ಲಿ ಲೈಟ್ ಕಂಬವಾಗಿ ಹುಟ್ಟಿ, ಆವಾಗ ನೋಡ್ಕೋತೀನಿ.

***

ಗುಂಡ : ನಿನಗೆ ಪ್ರೀತಿ ಮುಖ್ಯನಾ, ಸ್ನೇಹ ಮುಖ್ಯನಾ? ಸರಿಯಾಗಿ ಆಲೋಚನೆ ಮಾಡಿ ಹೇಳು.
ತಿಮ್ಮ : ನನಗೆ ಪ್ರೀತಿ ಮುಖ್ಯ, ನಿನಗೆ?
ಗುಂಡ : ನನಗೆ ಸ್ನೇಹ ಮುಖ್ಯ. ಯಾಕೆಂದ್ರೆ, ಪ್ರೀತಿಗೆ ಮದುವೆಯಾಗಿದೆ. ಸ್ನೇಹ ಇನ್ನು ಡಿಗ್ರಿ ಓದುತ್ತಿದ್ದಾಳೆ.

***



ಅಮೆರಿಕನ್ನರ ಜೀವನದ ಶೈಲಿ...
ಮಗಳು : ಸಾರಿ ಡ್ಯಾಡ್, ನನಗೆ ನಿನ್ನೆ ಮದುವೆ ಆಯಿತು. ನಿನಗೆ ಹೇಳಲು ಮರೆತು ಹೋಯಿತು. ಡೋಂಟ್ ಫೀಲ್ ಬ್ಯಾಡ್.
ತಂದೆ : ಇಟ್ಸ್ ಓಕೆ, ಬಟ್ ನೆಕ್ಸ್ಟ್ ಟೈಮ್ ಮಾತ್ರ ಮರೀ ಬೇಡ!

***

ಟೀಚರ್ : ವಿದ್ಯಾರ್ಥಿಗಳು ಒಳ್ಳೆ ಮನಸ್ಸಿನಿಂದ ಪ್ರಾರ್ಥನೆ ಮಾಡಿದರೆ ದೇವ್ರು ಯಾವ ವರ ಬೇಕಾದರೂ ಕೊಡ್ತಾನೆ.
ಗುಂಡ : ಅಯ್ಯೋ ಸುಮ್ನಿರಿ ಟೀಚರ್, ಅದು ನಿಜಾನೆ ಆಗಿದ್ರೆ ಇಷ್ಟೊತ್ತಿಗೆ ನೀವು ನನ್ನ ವೈಫ್ ಆಗಿರ್ತಿದ್ರಿ!

***

ಹುಡುಗಿರ ಲೈಫ್ ನೀರಿನ ತರಹ...
ಹುಡುಗರ ಲೈಫ್ ಮೊಬೈಲ್ ತರಹ...
ಮೊಬೈಲ್ ನೀರಿಗೆ ಬಿದ್ದರೂ ಅಥವಾ ನೀರು ಮೊಬೈಲ್ ಮೇಲೆ ಬಿದ್ದರೂ.. ಹಾಳಾಗುವುದು ಮೊಬೈಲ್ ಮಾತ್ರಾ!

***

ನಾಯಿಯೊಂದು ಬೆಕ್ಕನ್ನು ಅಗಾಧವಾಗಿ ಪ್ರೀತಿಸಲು ಆರಂಭಿಸಿತು..
ತನ್ನ ಪ್ರೀತಿಯ ವಿಷಯವನ್ನು ಮನೆಯವರ ಬಳಿ ತೋಡಿಕೊಂಡಿತು..
ನಾಯಿಯ ಮನೆಯವರು ಈ ಸಂಬಂಧವನ್ನು ನಿರಾಕರಿಸಿದರು..
ಏನಕ್ಕೆಂದರೆ.. ಛೆ.. ಹುಡುಗಿಗೆ ಮೀಸೆ ಇದೆ!

***

ಒಬ್ಬ ಹುಡುಗ ರಜನೀಕಾಂತ್ ಮನೆ ಮುಂದೆ ಕ್ರಿಕೆಟ್ ಆಡುತ್ತಿದ್ದ..
ಹುಡುಗ ಹೊಡೆದ ರಭಸಕ್ಕೆ ರಜನೀಕಾಂತ್ ಮನೆಯ ಕಿಟಕಿ ಒಡೆದು ಹೋಯಿತು..
ರಜನಿ ಬಾಲ್ ಹಿಡಿದು ಹುಡುಗನಿಗೆ ನಿಧಾನವಾಗಿ ಆಡು ಎಂದು ಉಪದೇಶಿಸಿದರು..
ಆ ಹುಡುಗ ಮತ್ಯಾರೂ ಅಲ್ಲ.. ರಾಹುಲ್ ದ್ರಾವಿಡ್!
--

ಮಜನೂ ಡಾರ್ಲಿಂಗ್, ಪ್ರೀತಿ ಹುಟ್ಟಿದ್ದು ಎಲ್ಲಿಂದ?


ಲೈಲಾ : ಮಜನೂ ಡಾರ್ಲಿಂಗ್, ಪ್ರೀತಿ ಹುಟ್ಟಿದ್ದು ಎಲ್ಲಿಂದ ಗೊತ್ತಾ?
ಮಜನೂ : ಅಷ್ಟೂ ಗೊತ್ತಿಲ್ವೇನೆ ಲೈಲಿ... ಚೀನಾದಿಂದ.
ಲೈಲಾ : ಅದ್ಹೇಗೆ ಅಷ್ಟು ನಿಖರವಾಗಿ ಹೇಳ್ತೀಯಾ?
ಮಜನೂ : ಯಾಕಂದ್ರೆ ಪ್ರೀತಿಗೆ ಗ್ಯಾರಂಟಿ ಮತ್ತು ವಾರಂಟಿ ಎರಡೂ ಇರುವುದಿಲ್ಲ!

***

ಗುಂಡಣ್ಣ : ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಬಸ್ ಕಂಡಕ್ಟರ್ ನಡುವಿನ ಸಾಮ್ಯತೆ ಏನು?
ಟಿಂಗಣ್ಣ : ಏನೋಪ್ಪಾ? ನೀನೇ ಹೇಳಿಬಿಡು.
ಗುಂಡಣ್ಣ : ಸಿಂಪಲ್, ಅವರಿಬ್ಬರು ಜಪಿಸುವ ಮಂತ್ರ ಒಂದೇ, ಅದು 'ಚೇಂಜ್ ಬೇಕು'!

***

ಗುಂಡನ ಮಡದಿ ಅವಳಿ ಮಕ್ಕಳಿಗೆ ಜನ್ಮವಿತ್ತಳು
ಗುಂಡ ಇಡೀ ರಾತ್ರಿ ನಿದ್ದೆ ಮಾಡದೆ ಆಲೋಚಿಸುತ್ತಿದ್ದ..
ಗುಂಡ ಏನು ಆಲೋಚನೆ ಮಾಡುತ್ತಿದ್ದಾಂದರೆ... ಎರಡನೇ ಮಗುವಿನ ತಂದೆ ಯಾರಿರಬಹುದು ಎಂದು!

***

ರಾಜಕಾರಿಣಿಯ ಮಗ ಸ್ಕೂಲ್ ನಲ್ಲಿ ಓದುತ್ತಿದ್ದ...
ಟೀಚರ್ : ನಿಮ್ಮ ಮಗ ಫೈಲ್ ಆಗಿದ್ರೂ ನೀವು ಯಾಕೆ ಸಿಹಿ ಹಂಚುತ್ತಿದ್ದೀರಾ ಎಂದು ನನಗೆ ಅರ್ಥವಾಗುತ್ತಿಲ್ಲ.
ರಾಜಕಾರಿಣಿ : ಟೀಚರ್, ಕ್ಲಾಸ್ ನಲ್ಲಿ 50 ಜನರ ಪೈಕಿ 40 ವಿದ್ಯಾರ್ಥಿಗಳು ಫೈಲ್, ಹಾಗಿದ್ದ ಮೇಲೆ ಬಹುಮತ ನನ್ನ ಮಗನ ಕಡೆಗೆ ಇದ್ದ ಹಾಗೆ ತಾನೇ!

***

ಗುಂಡನಿಗೆ ಈಜು ಬರುತ್ತಿರಲಿಲ್ಲ. ಒಂದು ದಿನ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದ, ನೀರಿನಲ್ಲಿ ಮುಳುಗಬೇಕಾದರೆ ಕೈಗೆ ಸಿಕ್ಕಿದ ಒಂದು ಮೀನನ್ನು ದಡಕ್ಕೆ ಎಸೆದು ಹೇಳ್ತಾನೆ... ನಾನಂತೂ ಬದುಕೊಲ್ಲ.. ನೀನಾದ್ರೂ ಬದುಕೋ ಹೋಗು. I liked it JJ

***

ನಿಜವಾದ ಗೆಳೆತನದ ಪರಮಾವಧಿ...
ತಡರಾತ್ರಿ ಮನೆಗೆ ಬಂದ ಮಗನನ್ನು ಅಪ್ಪ ಪ್ರಶ್ನಿಸುತ್ತಾನೆ.
ಅಪ್ಪ: ಎಲ್ಲಿಗೆ ಹೋಗಿದ್ದೆ ಇಷ್ಟು ಹೊತ್ತು?
ಮಗ: ಸ್ನೇಹಿತನ ಮನೆಯಲ್ಲಿದ್ದೆ ಅಪ್ಪಾ.
ಅಪ್ಪ ಅವನ 10 ಜನ ಸ್ನೇಹಿತರಿಗೆ ಫೋನ್ ಮಾಡಿ ವಿಚಾರಿಸಿದಾಗ..
ಹತ್ತು ಜನ ಸ್ನೇಹಿತರಲ್ಲಿ ಆರು ಜನ ಇಲ್ಲೇ ಇದ್ದಾ ಅಂಕಲ್ ಅಂದರು.
ಮೂರು ಜನ, ಈಗಷ್ಟೆ ಹೋರಾಟ ಅಂಕಲ್ ಹೇಳಿದರು.
ಇನ್ನೊಬ್ಬ, ಇಲ್ಲೇ ಇದ್ದಾನೆ ಅಂಕಲ್ ಫೋನ್ ಕೊಡ್ಲಾ ಅಂದಾಗ ಅಪ್ಪ ಹೌಹಾರಿದ..

***

ಗುಂಡ ರೈಲ್ವೆ ಟಿಸಿಯ ಬಳಿ ವಿಚಾರಿಸುತ್ತಾನೆ..
ಗುಂಡ: ಎಕ್ಸ್ ಪ್ರೆಸ್ ಟ್ರೈನ್ ಎಷ್ಟು ಗಂಟೆಗಿದೆ?
ಟಿಸಿ: ಒಂದು ಗಂಟೆಗೆ
ಗುಂಡ: ಲೋಕಲ್ ಟ್ರೈನ್?
ಟಿಸಿ: 9 ಗಂಟೆಗೆ
ಗುಂಡ: ಗೂಡ್ಸ್ ಗಾಡಿ..?
ಟಿಸಿ: ನಿನಗೆ ಎಲ್ಲಪ್ಪಾ ಹೋಗಬೇಕು?
ಗುಂಡ: ಎಲ್ಲೂ ಇಲ್ಲಾ.. ಹಳಿ ದಾಟಬೇಕಿತ್ತು.
***

ಪುಸ್ತಕ ಓದುತ್ತಿದ್ದ ವೈದ್ಯ ಡಿಸ್ಮಿಸ್ ಆದ!


ಆಸ್ಪತ್ರೆಯ ಗ್ರಂಥಾಲಯದಲ್ಲಿ ಪುಸ್ತಕವೊಂದನ್ನು ಓದುತ್ತಿದ್ದ ವೈದ್ಯನೊಬ್ಬನನ್ನು ಆಡಳಿತ ಮಂಡಳಿ ಕೆಲಸದಿಂದ ಡಿಸ್ ಮಿಸ್ ಮಾಡಿತು.
ಆ ವೈದ್ಯ ಯಾವ ಪುಸ್ತಕ ಓದುತ್ತಿದ್ದಿದ್ದಕ್ಕಾಗಿ ಆಡಳಿತ ಮಂಡಳಿ ಈ ನಿರ್ಧಾರ ತೆಗೆದುಕೊಂಡಿತು ಹೇಳಿ? ಉತ್ತರ ಹೊಳೀತಾ?
ಆ ವೈದ್ಯ ಓದುತ್ತಿದ್ದ ಪುಸ್ತಕ "30 ದಿನಗಳಲ್ಲಿ ವೈದ್ಯನಾಗುವುದು ಹೇಗೆ?!"

***

ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕಾಲೇಜು ಜೀವನದ ಮೊದಲ ದಿನ. ಒಬ್ಬ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ನಡುವಿನ ಸಂವಾದ...
ವಿದ್ಯಾರ್ಥಿ : ನಿನ್ನ ಹೆಸರೇನು?
ವಿದ್ಯಾರ್ಥಿನಿ : ಎಲ್ಲರೂ ನನ್ನನ್ನು " ಅಕ್ಕ' ಅಂತಾರೆ.
ವಿದ್ಯಾರ್ಥಿ : ವಾವ್, what a co-incident. ಎಲ್ಲರೂ ನನ್ನನ್ನ "ಬಾವ" ಅಂತಾರೆ!

***

ಅಪ್ಪ : ಲೇ ಗುಂಡ, ನಿನ್ನ ಪರೀಕ್ಷೆ ಫಲಿತಾಂಶ ಏನಾಯಿತು?
ಗುಂಡ : ಅಪ್ಪಾ, ನಾನು ಮತ್ತೆ ಫೇಲ್ ಆದೆ.
ಅಪ್ಪ : ಇನ್ನು ಮುಂದೆ ನನ್ನನ್ನು ಅಪ್ಪಾ ಅಂತ ಕರೀಬೇಡ.
ಗುಂಡ : .. ಕಮಾನ್ ಅಪ್ಪಾ.. ನಾನು ಹೇಳ್ತಾ ಇದ್ದಿದ್ದು ನನ್ನ ಸ್ಕೂಲ್ ಟೆಸ್ಟ್ ಬಗ್ಗೆ, ಡಿಎನ್ಎ ಟೆಸ್ಟ್ ಬಗ್ಗೆ ಅಲ್ಲ.

***

ಮಗ : ಅಪ್ಪಾ ನಮ್ ಟೀಚರ್ ಸೂಪರ್ ಆಗಿದ್ದಾರೆ.
ಅಪ್ಪ : ಹಾಗೆಲ್ಲ ಹೇಳಬಾರದು ಮಗು, ಟೀಚರ್ ಅಮ್ಮನಿಗೆ ಸಮಾನ.
ಮಗ : ಹೋಗಪ್ಪಾ ನೀನು, ಯಾವಾಗ್ಲೂ ನಿಂಗೇ ಸೆಟ್ ಮಾಡ್ಕೋಳೋಕೆ ನೋಡ್ತೀಯಾ.

****

ನಿಮ್ಮ ಕವನ ಅಂದರೆ ನನಗೆ ಬಹಳ ಇಷ್ಟ ಸರ್!

ಗುಂಡ : ನಿಮ್ಮ ಕವನ ಅಂದರೆ ನನಗೆ ಬಹಳ ಇಷ್ಟ ಸರ್.
ಕವಿ : ನನ್ನ ಯಾವ ಕವನ ನಿನಗೆ ಇಷ್ಟಪ್ಪಾ?
ಗುಂಡ : ಅದೇ ಸಾರ್... ನಿಮ್ಮ ಎರಡನೇ ಮಗಳು.. ಕವನ.

***

ಅಂದು 1947ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀ ದುಡಿದರು ದೇಶಕ್ಕಾಗಿ.
ಇಂದು 2010ರಲ್ಲಿ ನಾವು ದುಡಿಯುತ್ತಿರುವುದು ಗಾಂಧೀ ನೋಟಿಗಾಗಿ.

***

ಸರ್ದಾರ್ಜಿ ಮತ್ತು ಕಪ್ಪೆ ನಡುವೆ ವಾಗ್ಯುದ್ದ ನಡೆಯಿತು.
ಕಪ್ಪೆ : ನೀವು ಸರ್ದಾರ್ಜಿಗಳು ಮುಠಾಳರು.
ಸರ್ದಾರ್ಜಿ : ಇಲ್ಲಾ ನಾವು ಮುಠಾಳರಲ್ಲ.
ಕಪ್ಪೆ : ನಿನ್ನ ಜೊತೆ ಮಾತನಾಡುವುದು ವೇಸ್ಟ್, ಸುಮ್ನೆ ಸಮಯ ವ್ಯರ್ಥ (ಎಂದು ಬಾವಿಗೆ ಹಾರಿತು)
ಸರ್ದಾರ್ಜಿ : ಛೇ.. ಇದರಲ್ಲಿ ಕಪ್ಪೆ ಆತ್ಮಹತ್ಯೆ ಮಾಡಿಕೊಳ್ಳುವಂತದ್ದೇನಿದೆ?

***

ಮನಮುಟ್ಟುವ ಕನ್ನಡ ಸಂದೇಶಗಳು

ಮನಸಿಗೆ ನೋವಾಗುವಂತೆ ಮಾತಾಡಿ ನಾವು ಕೆಲವರನ್ನು ಕಳ್ಕೊತೀವಿ
ಹಾಗೆ ಏನೂ ಮಾತಾಡದೇ ಕೆಲವರನ್ನು ಕಳ್ಕೊತೀವಿ
ಏನೆ ಆಗಲಿ ಮನಸ್ಸು ಬಿಚ್ಚಿ ಮಾತಾಡಿ, ಜಸ್ಟ್ ಮಾತ್ ಮಾತಲ್ಲಿ.

***

Love is blind
ಅಂತಾರೆ ಏನಕ್ಕೆ ಗೊತ್ತಾ?
ನಮ್ಮ ಮುಖ ನೋಡುವ ಮುಂಚೆನೇ ಅಮ್ಮ ನಮ್ಮನ್ನು ಪ್ರೀತಿಸಲು ಶುರುಮಾಡಿರುತ್ತಾರೆ.

***

ಸುಂದರವಾದ ಹುಡುಗಿ ಸಿಕ್ಕಿದ ಕೂಡಲೇ ಆಕೆಯನ್ನು ಪ್ರೀತಿಸಬೇಡ
ಆಕೆಗಾಗಿ ನಿನ್ನ ನಿದ್ದೆಯನ್ನು ಹಾಳು ಮಾಡಿಕೊಳ್ಳಬೇಡ
ಎರಡು ದಿನ ಖುಷಿ ಖುಷಿಯಾಗಿ ನಿನ್ನನ್ನು ಭೇಟಿಯಾಗಿ..
ಮೂರನೇ ದಿನ ಎನ್ನುವಳು "ನನಗಾಗಿ ಕಾಯಬೇಡ"

***
ನಿಮ್ಮ ಪ್ರೀತಿ ಮತ್ತು ಅದರ ಭವಿಷ್ಯವನ್ನು ತಿಳಿಯಲು ಈ ರೀತಿ ಟೈಪ್ ಮಾಡಿ
Love,
ನಿಮ್ಮ ಹೆಸರು + ನೀವು ಪ್ರೀತಿಸುತ್ತಿರುವ ಹುಡುಗಿಯ/ಹುಡುಗನ ಹೆಸರು
ಟೈಪ್ ಮಾಡಿ ನಿಮ್ಮ ತಂದೆಯ ಮೊಬೈಲ್ ಗೆ ಕಳುಹಿಸಿ, ಅವರು ನಿಮ್ಮ ಮತ್ತು ಪ್ರೀತಿಯ ಭವಿಷ್ಯವನ್ನು ನಿರ್ಧರಿಸುತ್ತಾರೆ.
***
ಟೆನಿಸ್ ಆಟಗಾರ ಫೆಡರರ್ ಮತ್ತು ರಜನೀಕಾಂತ್ ನಡುವೆ ಮಾತುಕತೆ ನಡೆಯುತ್ತಿತ್ತು
ಫೆಡರರ್ : ಟೆನಿಸ್ ಆಟದ ಬಗ್ಗೆ ನನಗೆ ಬಹಳ ಅರಿವಿದೆ. ಅದರ ಬಗ್ಗೆ ಏನೇ ಪ್ರಶ್ನೆ ಕೇಳಿ ಉತ್ತರಿಸಬಲ್ಲೆ
ರಜನಿ: .. ದಟ್ಸ್ ಗ್ರೇಟ್, ಸರಿ ಟೆನಿಸ್ ಆಟಕ್ಕೆ ಬಳಸುವ ನೆಟ್ ನಲ್ಲಿ ಎಷ್ಟು ತೂತಿದೆ ಹೇಳಿ?
***
ಕವಿತೆ ಬರೆಯಲು ಹೋದರೆ ನನಗೆ ನಿಮದೇ ನೆನಪು..
ಯಾಕೆಂದರೆ, ನೀವೇ ಅಲ್ವಾ .. ನೀವೇ ಅಲ್ವಾ.. ನೀವೇ ಅಲ್ವಾ.. ನನ್ನ ಪೆನ್ನು ಕದ್ದಿದ್ದು
***
ಮುಖ ನೋಡಿ ಮೋಸ ಹೋಗಬೇಡಿ.. ಮನಸು ನೋಡಿ ಕರಗಿ ಹೋಗಬೇಡಿ..
ಜೀವನ ನೋಡಿ ಬೇಜಾರು ಆಗಬೇಡಿ.. ನಿಮಗೆ ಯಾರಾದರೂ ಇಷ್ಟವಾದರೆ ಕೊನೆ ತನಕ ಅವರನ್ನು ಮರೀಬೇಡಿ..
***
ಮಾತು ಬೆಳ್ಳಿ, ಎಸ್ಎಂಎಸ್ ಬಂಗಾರ..
ಮಾತು ಮನೆ ಕೆಡಿಸಿದ್ರೆ.. ಎಸ್ಎಂಎಸ್ ತಲೆ ಕೆಡಿಸುತ್ತೆ..
ಮಾರುದ್ದದ ಟವರ್..ಮೋಟುದ್ದದ ನೆಟ್ ವರ್ಕ್..
ಎಸ್ಎಂಎಸ್ ನಲ್ಲಿ ಹೋದ ಮಾನ, ಕಾಲ್ ಮಾಡಿದರೂ ಬರಲ್ಲಾ..
ಕಂಡೋರ ಸೆಲ್ ನಲ್ಲಿ ಫೋನ್ ಮಾಡುವವನೇ ಜಾಣ..
***

ನಮ್ಮ ಉಂಡಾಡಿ ಗುಂಡನ ವಾದ ಹೇಗಿದೆ ನೋಡಿ!

* ಕ್ರೀಂ ಬಿಸ್ಕತ್ ನಲ್ಲಿ ಕ್ರೀಂ ಇರುತ್ತೆ, ಆದ್ರೆ ಬೆಣ್ಣೆ ಬಿಸ್ಕತ್ ನಲ್ಲಿ ಬೆಣ್ಣೆ ಇರುತ್ತಾ?

*
ನಾನ್ ಬಸ್ ನಲ್ಲಿ ಹತ್ತಿದ್ರೂ ಅಥವಾ ಬಸ್ ನನ್ ಮೇಲೆ ಹತ್ತಿದ್ರು ಟಿಕೆಟ್ ತಗೊಳೋನು ನಾನೇ!

*
ಸೆಲ್ ನಲ್ಲಿ ಬ್ಯಾಲನ್ಸ್ ಇಲ್ಲಾಂದ್ರೆ 'ಕಾಲ್' ಮಾಡೋಕೆ ಆಗಲ್ಲಾ.. ಮನುಷ್ಯನಿಗೆ 'ಕಾಲ್' ಇಲ್ಲಾಂದ್ರೆ ಬ್ಯಾಲನ್ಸ್ ಮಾಡೋಕೆ ಆಗಲ್ಲಾ!

*
ರೈಲು ಎಷ್ಟೇ ವೇಗವಾಗಿ ಬಂದ್ರೂನೂ ಕೊನೆಯ ಬೋಗಿ ಬರೋದು ಕೊನೆಗೇನೆ..

*
ಬಸ್ ಹತ್ತಿ ಹೋದ್ರೂ.. ಬಸ್ ಸ್ಟ್ಯಾಂಡ್ ಅಲ್ಲೇ ಇರುತ್ತೆ.. ಆದ್ರೆ ಸೈಕಲ್ ಹತ್ತಿ ಹೋದ್ರೆ ಸೈಕಲ್ ಸ್ಟ್ಯಾಂಡ್ ನಮ್ಮ ಜೊತೆಗೆ ಬರುತ್ತೆ..

*
ನಾಯಿಗೆ ನಾಲ್ಕು ಕಾಲ್ ಇರಬಹುದು.. ಆದರೂ ಅದಕ್ಕೆ ಕಾಲ್ ಮೇಲೆ ಕಾಲ್ ಹಾಕೊಂಡು ಕೂರಕ್ಕೆ ಆಗುತ್ತಾ?

*
ಸೊಳ್ಳೆ ಕಚ್ಚಿದ್ರೆ 'ಆನೆ ಕಾಲ್' ಬರುತ್ತೆ.. ಆದ್ರೆ ಆನೆ ಕಚ್ಚಿದ್ರೆ 'ಸೊಳ್ಳೆ ಕಾಲ್' ಬರುತ್ತಾ?

* 10
ಇರುವೆ ಸೇರಿ ಒಂದು ಆನೆ ಕಚ್ಚಬಹುದು.. ಆದ್ರೆ 10 ಆನೆ ಸೇರಿ ಒಂದು ಇರುವೆನಾ ಕಚ್ಚಕ್ಕೆ ಆಗುತ್ತಾ?
***

ಶನಿವಾರ, ಜನವರಿ 8, 2011

ಬೆಂಗಳೂರು buzz !

ಬೆಂಗಳೂರು ಮೆಟ್ರೋ





Number Of Stations: 32
Number Of Commuters Per Day: 820,000
Proposed Fare: 1.33-1.66 times the bus fares. Annual escalation fares at 4%

East-West Corridor North-South Corridor
Elevated
  • Along old Madras Road up to junction of 100-ft Road, Indiranagar
  • 100ft road to BM Sri Circle
  • BM Sri Circle along CMH Road up to Aanjanappa Circle
  • Aanjanappa Circle (Ulsoor) along SV Road up to Trinity Circle
  • Trinity Circle to Mayo Hall

Underground

  • Mayo Hall-Cubbon Park along Bal Bhavan Road
  • Dr Ambedkar Road (from MS Building up to KR Circle) along District Office Road-Post Office Road
  • Majestic Circle near SBM-KG Road
  • KARTC bus stand-below railway station
  • Magadi road up to Leprosy Hospital

Elevated

  • From Leprosy Hospital along Magadi Road up to Tollgate (junction of Chord Road)
  • Along Chord Road up to Mysore Road
  • Along Mysore Road up to Nayandahalli
Elevated
  • From Yeshwanthpur along Tumkur Road up to Soap Factory
  • From Soap Factory Circle along West of Chord Road up to Modi Hospital Road Junction
  • Along Mahakavi Kuvempu Road up to Railway Bridge at Malleswaram;Runs parallel to railway track up to Swastik

Underground

  • From Swastik (Opposite Stadium) along Platform Road
  • KSRTC bus stand-below East-West Corridor
  • Below Balepet-Nagarthpet-Arcot Srinivasachar street
  • Below Vanivilas Hospital and become elevated at Bangalore Medical College

Elevated

  • KR Road (Near BMC) up to Vanivilas Circle
  • Along VV Road up to Lalbagh West Gate
  • From West Gate along RV Road up to dead-end of RV Road



ಅನುಕೂಲ ಮತ್ತು ಅನಾನುಕೂಲಗಳು
ಬೆಂಗಳೂರು ವೊಂದು ಕಾಲದಲ್ಲಿ ಸುಂದರ ನಗರಿ ಹಸಿರು ನಗರಿ ಎಂದು ಪ್ರಖ್ಯಾತವಾಗಿತ್ತು ಆದರೆ ಮೆಟ್ರೋ ಕಾಮಗಾರಿ ಇಂದ ಕಲುಷಿತ ನಗರಿಯಾಗಿದೆ. ಎಲ್ಲಿ ನೋಡಿದರೂ ಧೂಳು ಹಾಳಾದ ರಸ್ತೆಗಳು, ಟ್ರಾಫಿಕ್ ಜಾಮ್ಗಳು. ಜನರಿಗೆ ಇದರಿಂದಾಗಿ ನಾನಾ ಬಗೆಯ ರೋಗಗಳು ಬರುತಿದೆ. ಜನರು ಈ ಕಾಮಗಾರಿ ಮುಗಿದರೆ ಸಾಕು ಎಂದು ದಿನವಿಡೀ ಶಾಪ ಹಾಕುತ್ತಾ ಕಳೆಯುತ್ತಿದ್ದಾರೆ.


ಬೆಂಗಳೂರು ವಿಮಾನ ನಿಲ್ದಾಣ

ಹೊಸ ವರ್ಷದ ಶುಭಾಶಯಗಳು 2011

ಹೊಸ ವರುಷ ತರಲಿ ಹರುಷ